ಅರ್ಜುನ ಪ್ರಶಸ್ತಿ ಇದೇ ಮೊದಲ ಆಸ್ತಿ
Posted date: 30/September/2010

ಪ್ರವರ್ಧಮಾನಕ್ಕೆ ಬರುತ್ತಿರುವ ಸಂಗೀತ ನಿರ್ದೇಶಕ ಅರ್ಜುನ್ ಚೊಚ್ಚಲ ’ಸೌತ್ ಸ್ಕೋಪ್ ಸಿನಿಮಾ’ ಪ್ರಶಸ್ತಿಯಿಂದ ಆನಂದ ಹೊಂದಿದ್ದು ಅದಕ್ಕೆ ಕಾರಣರಾದ ಹೆತ್ತವರು, ಮಾಧ್ಯಮದವರು ಹಾಗೂ ಉದ್ಯಮದವರಿಗೂ ವಂದನೆಯನ್ನು ಸಲ್ಲಿಸಿದ್ದಾರೆ. ’ಬಿರಗಾಳಿ’ ಚಿತ್ರಕ್ಕೆ ಈ ಪ್ರಶಸ್ತಿಯನ್ನು ಪಡೆದಿರುವ ಅರ್ಜುನ್ ಅದೇ ಚಿತ್ರದ ಮಧುರಾ ಪಿಸುಮಾತಿಗೆ........ ಹಾಡಿಗೆ ಗಾಯಕಿ ಶಮಿತಾ ಮಲ್ನಾಡ್ ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ದೊರೆತಿರುವುದಕ್ಕೆ ಇನ್ನಷ್ಟು ಖುಷಿಯಾಗಿದೆ ಎನ್ನುತ್ತಾರೆ.

ಕಳೆದ ೪ ವರ್ಷಗಳಿಂದ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ೧೧ ಕನ್ನಡ ಸಿನಿಮಾಗಳಿಗೆ ರಾಗ ಸಂಯೋಜನೆ ಮಾಡಿರುವ ಅರ್ಜುನ್ ಪ್ರಮುಖ ಚಿತ್ರಗಳೆಂದರೆ ’ಬಿರುಗಾಳಿ, ಸ್ಲಂಬಾಲ, ಪಟ್ರೆ ಲವ್ಸ ಪದ್ಮ, ಧಿಮಾಕು, ಸಂಚಾರಿ ಹಾಗೂ ಗುಬ್ಬಿ’. ೧೬ನೇ ವಯಸ್ಸಿನಿಂದ ಕೀಬೋರ್ಡ್ ನುಡಿಸುತ್ತಾ ಸಂಗೀತ ನಿರ್ದೇಶಕ ವಿ.ಮನೋಹರ್ ಹಾಗೂ ಕೆ.ಕಲ್ಯಾಣ್ ಗರಡಿಯಲ್ಲಿ ಪಳಗಿದ ಅರ್ಜುನ್ ಅವರ ಬಿಡುಗಡೆಯಾಗಬೇಕಿರುವ ಚಿತ್ರಗಳು - ’ರಾಜಾಧಾನಿ, ಮರೆಯಲಾರೆ ಹಾಗೂ ಕೆಂಪೇಗೌಡ’.

ಈ ಪತ್ರಿಕಾ ಪ್ರಕಟಣೆ ಮೂಲಕ ಸಂಗೀತ ನಿರ್ದೇಶಕ ಅರ್ಜುನ್ ಕಳೆದ ಸೆಪ್ಟೆಂಬರ್ ೧೯ ರಂದು ಅಚ್ಚುಕಟ್ಟಾದ ವರ್ಣರಂಜಿತ ಸಮಾರಂಭ ಏರ್ಪಡಿಸಿದ್ದ   ’ಸೌತ್ ಸ್ಕೋಪ್ ಸಿನಿಮಾ’ ಮಂಡಳಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸುತ್ತಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed